ಅಪ್ಪಣ್ಣಗೌಡ ಪಾಟೀಲರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು ಕರ್ನಾಟಕದ ಸಹಕಾರ ಚಳವಳಿಯಲ್ಲಿ ಪ್ರಮುಖ ನಾಯಕರಾಗಿದ್ದರು. == ಸಾಧನೆ == ೩೧ ಜುಲೈ ೧೯೬೮ ರಂದು ಅಸ್ತಿತ್ವಕ್ಕೆ ಬಂದ ಹುಕೇರಿ ರೂರಲ್ ಎಲೆಕ್ಟ್ರಿಕ್ ಕೋಆಪರೇಟಿವ್ ಸೊಸೈಟಿ ಸ್ಥಾಪನೆಯ ಹಿಂದಿನ ಕಾರಣಕರ್ತರು ಇವರಾಗಿದ್ದರು. == ಗುರುತಿಸುವಿಕೆ == ಸಹಕಾರ ಚಳವಳಿಗೆ ಅವರು ನೀಡಿದ ಕೊಡುಗೆಗಳಿಗೆ ಗೌರವಾಥಾ೯ವಾಗಿ ಅವರ ಪೀಠವನ್ನು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ. ಹುಕ್ಕೇರಿ ರೂರಲ್ ಎಲೆಕ್ಟ್ರಿಕ್ ಕೋ-ಆಪರೇಟಿವ್ ಸೊಸೈಟಿಯು ಭಾರತದ ಮೊದಲ ವಿದ್ಯುತ್ ಸಹಕಾರಿ ಸಂಘವಾಗಿದೆ. ಇದು ಕಬ್ಬಿಣದ ಕಂಬಗಳಿಗೆ ಪರ್ಯಾಯವಾಗಿ ಸಿಮೆಂಟ್ ಕಂಬಗಳ ತಯಾರಿಕೆಯಲ್ಲಿ ತೊಡಗಿರುವ ಒಂದು ಘಟಕವನ್ನು ಅವರ ಹೆಸರಿನಲ್ಲಿ ನಡೆಸುತ್ತಿದೆ. == ಉಲ್ಲೇಖಗಳು ==